ಈಶಾನ್ಯ ಗಡಿ ರೈಲ್ವೆಯಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ

HALLI HAIDA JOBS NEWS
0

ಈಶಾನ್ಯ ಗಡಿ ರೈಲ್ವೆ ನೇಮಕಾತಿ 204|10th ITI PASS RAILWAY JOBS 2024 @HalliHaidajobsNews


ಈಶಾನ್ಯ ಗಡಿ ರೈಲ್ವೆಯಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ ಕರ್ತವ್ಯ ಸ್ಥಳ ,ಶೈಕ್ಷಣಿಕ ಅರ್ಹತೆ ,ವಯೋಮಾನ ,ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಪೂರ್ತಿ ಓದಿ.

ಈಶಾನ್ಯ ಗಡಿ ರೈಲ್ವೆ ನೇಮಕಾತಿ 2024 :

ಹುದ್ದೆ : ಅಪ್ರೆಂಟಿಸ್

ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.

ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 5647  ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50 % ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಜೊತೆಗೆ ಆಯಾ ಟ್ರೇಡೆಗಳಲ್ಲಿ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ) ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.(ಮೆಡಿಕಲ್ ಲ್ಯಾಬೊರೇಟರಿ ಟೆಕ್ಚಷಿಯನ್ ಹುದ್ದೆಗೆ 12 ನೇ ತರಗತಿ ಕನಿಷ್ಟ50 % ಅಂಕಗಳೊಂದಿಗೆ ಉತ್ತೀರ್ಣರಾಗಿರ್ಬೇಕು.)

ಉದ್ಯೋಗ ಮಾಹಿತಿ : ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನೇಮಕಾತಿ 2024  

ವಯೋಮಾನ : ದಿನಾಂಕ 03-12-2024 ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಟ15  ವರ್ಷ ಪೊರೈಸಿರಬೇಕು ಹಾಗೂ ಗರಿಷ್ಟ 24  ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :

  • SC ,ST ,ಅಭ್ಯರ್ಥಿಗಳಿಗೆ -೦೫ ವರ್ಷ
  • OBC ಅಭ್ಯರ್ಥಿಗಳಿಗೆ - 03 ವರ್ಷ
  • PWD  ಅಭ್ಯರ್ಥಿಗಳಿಗೆ - 10  ವರ್ಷ

ಆಯ್ಕೆ ವಿಧಾನ :

ಅಭ್ಯರ್ಥಿಗಳು ವಿದ್ಯಾಹರ್ತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ದಪಡಿಸಲಾಗಿದೆ.ಮೆರಿಟ್ ಲಿಸ್ಟ್ನಲ್ಲಿ ಬಂದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೇ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತೆ

ಇತರೆ ಮಾಹಿತಿ : ಈಶಾನ್ಯ ಗಡಿ ರೈಲ್ವೆ ಅಪ್ರೆಂಟಿಸ್ ಹುದ್ದೆಗಳನ್ನು ಪಂಬ್ಲರ್,ಕಾರ್ಪಇಂಟೆರ್ ,ವೆಲ್ಡರ್ ,(ಗ್ಯಾಸ್ ಇಲೆಕ್ಟ್ರಿಕ್ ),ಗ್ಯಾಸ್ ಕಟರ್ ,ಮೆಕ್ಯಾನಿಕ್ ಮಷೀನ್ ಟೂಲ್ ಮೆಂಟೆನಸ್ ,ಫಿಟ್ಟರ್ ,ಟರ್ನರ್ ,ಮಶೀನಿಸ್ಟ್ ,ಎಲೆಕ್ಟ್ರಿಸಿಯೋನ್ ,ಮೆಕ್ಯಾನಿಕ್ ರೆಫ್ರೆಜರೇಟರ್ & ಏರ್ ಕಂಡೀಷನಿಂಗ್ ,ಪೈಪ ಫಿಟ್ಟರ್ ,ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ,ಸ್ಟ್ರಾಕ್ಟುರಲ್ ವೆಲ್ಲ್ದರ್ ,ಇಲೆಕ್ಟ್ರಾನಿಕ್ ಮೆಕ್ಯಾನಿಕಲ್ ಲೈಮನ್ ,ಮೇಸನ್ ,ಪೈಂಟರ್ ಸೆಕ್ರೆಟರಿಯಲ್ ಅಸಿಸ್ಟೆಂಟ್ ,ಮೆಡಿಕಲ್ ಲ್ಯಾಬೊರೇಟರಿ ಟೆಕನಿಷನ್ ಹಾಗೂ ವಿವಿಧ ಟ್ರೇಡೆಗಳಲ್ಲಿ ನೇಮಕ ಮಾಡಲಾಗುತ್ತದೆ.ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಧಿಸೂಚನೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಯ ವಿಧಾನ : ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು

  • ಹಂತ 1 : ಆಮ್ಲಿಮೆ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
  • ಹಂತ 2 : ಇಲಾಖೆಯ ವೆಬ್ಸೈಟ್ ಗೆ ಬೇಟಿ ನೀಡಿ ಅಥವಾ ಕೆಳಗಡೆ ನೀಡಲಾದ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ತೆಗೆದುಕೊಳ್ಳಿ
  • ಹಂತ 3:ಅಪ್ಪ್ಲಿಕೇಷನ್ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು ,ವಿಳಾಸ ,ವಿದ್ಯಾರ್ಹತೆ ,ಮೊಬೈಲ್ ಸಂಖ್ಯೆ ಇತ್ಯಾದಿ )ಭರ್ತಿ ಮಾಡಿ ,ಮುಂದಿನ ಹಂತಕ್ಕೆ ತೆರೆಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
  • ಹಂತ 4: ಅಪ್ಲಿಕೇಶನ್ ಅಲ್ಲಿ ಯಾವುದೇ ಪ್ರಮಾಣ ಪತ್ರ /ದಾಖಲೆಗಳ ಅಪ್ಲೋಡ್ ಮಾಡಲು ಸೂಚಿಸಿದ್ದರೆ ,ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ )
  • ಹಂತ 5: ಕೊನೆಯದಾಗಿ,ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸುಚಿಸಿದ್ದರೆ ,ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ನಿಗದಿತ ಅರ್ಜಿ ಶುಲ್ಕದ ವಿವರ :

  • SC ST ಮಹಿಳಾ PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ
  • ಉಳಿದ ಅಭ್ಯರ್ಥಿಗಳಿಗೆ -ರೂ.100
  • ಶುಲ್ಕ ಪಾವತಿಸುವ ವಿಧಾನ :
  • ಅಭ್ಯರ್ಥಿಗಳು ಆನ್ಲೈನ್ನಲ್ಲಿ ಡೆಬಿಟ್ ಕಾರ್ಡ್,ಕ್ರೆಡಿಟ್ ಕಾರ್ಡ್ ,ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರಗಳು :

  • ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ :ನವೆಂಬರ್ 04-2024
  • ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ :ಡಿಸೆಂಬರ್ 03-2024 

ಅಧಿಕೃತ ಲಿಂಕ್ ಗಳು 


Post a Comment

0Comments

Post a Comment (0)